ನಿಯೋಜಿತ ಕಾರ್ಯ - 9
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಜನಿ ತಾ// ಔರಾದ(ಬಾ ) ಜಿ//ಬೀದರ
ವರ್ಕ್ ಫ್ರೊಂ ಹೋಮ್ ಅಡಿಯಲ್ಲಿ ಶಿಕ್ಷಕರಿಗೆ ನಿಯೋಜಿತ ಕಾರ್ಯಗಳು
ಇವರಿಂದ : ಇಮಾನವೆಲ್
ಸ.ಶಿ.(9986456239)
ನಿಯೋಜಿತ ಕಾರ್ಯ: " ಮನೆಯಿಂದಲೇ ಕೆಲಸದಡಿಯಲ್ಲಿ ನೀವು ತಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಹೇಗೆ ಬಳಸಿಕೊಂಡಿದ್ದಿರಿ”
“ಮನೆಯಿಂದಲೇ ಕೆಲಸ” ಇತ್ತೀಚಿನ ದಿನಗಳಲ್ಲಿ ಈ ಪದವನ್ನು
ಕೇಳದೇ ಇರುವ ಉದ್ಯೋಗಿಗಳು ಸಿಗುವುದು ವಿರಳ.ಕೇವಲ ಮಲ್ಟಿನ್ಯಾಷನಲ್ ಕಂಪನಿಗಳಿಗೆ ಸೀಮಿತವಾಗಿದ್ದ ಈ
ಪ್ರಕ್ರಿಯೆ ಇಂದು ಈ ಕೋವಿಡ-19 ರ ಉಲ್ಬಣದಿಂದಾಗಿ
ಭಾಗಶಃ ಎಲ್ಲಾ ಇಲಾಖೆಗಳು ಅನುಸರಿಸುತ್ತಿವೆ.
ಸಾಮಾನ್ಯವಾಗಿ
ವೃತ್ತಿ ಎಂದರೆ ನಾವು ತೊಡಗಿಸಿಕೊಂಡ ಕಾರ್ಯ ಎಂದು ಹೇಳಬಹುದು.ಮತ್ತು ವೃತ್ತಿ ನೈಪುಣ್ಯತೆ ಎಂದರೆ
ವೃತ್ತಿಯ ಅರ್ಥ, ವ್ಯಾಪ್ತಿ, ಹಾಗು ಪರಿಣಾಮಗಳನ್ನು ಅರ್ಥೈಸಿಕೊಂಡು ಗುಣಾತ್ಮಕವಾಗಿ
ಕಾರ್ಯ ನಿರ್ವಹಣೆಮಾಡುವುದೇ ಆಗಿದೆ.
ಎಲ್ಲಾ ವೃತ್ತಿಗಳಲ್ಲಿ ಶ್ರೇಷ್ಠವಾದ
ವೃತ್ತಿ ಶಿಕ್ಷಕ ವೃತ್ತಿ ಏಕೆಂದರೆ “ಶಿಕ್ಷಣವು ಮಾನವ ಸಂಪನ್ಮೂಲ ಅಭಿವುದ್ಧಿಗೆ ಇರುವ ಒಂದು ಮೂಲ
ಬಂಡವಾಳ” ಒಂದು ದೇಶದ ಅಭಿವೃದ್ಧಿ ಆ ದೇಶದ ಶಿಕ್ಷಣ ವ್ಯವಸ್ಥೆಯನ್ನು ಅವಲಂಬಿಸಿರುತ್ತದೆ.ಈ
ಶಿಕ್ಷಣ ಪ್ರಕ್ರಿಯೆ ನಿಲ್ಲಬಾರದೆಂಬ ಸದುದ್ದೇಶದಿಂದ ಎಲ್ಲಾ ಶಿಕ್ಷಕಬಾಂಧವರಿಗೂ “ಮನೆಯಿಂದಲೇ
ಕೆಲಸ" ನಿಯೋಜಿತ ಕಾರ್ಯ ನೀಡಿರುವ ಮಾನ್ಯ ಆಯುಕ್ತರ ವಿನೂತ ಪ್ರಯೋಗ ನಿಜಕ್ಕೂ ಅರ್ಥಪೂರ್ಣ
ಹಾಗು ಸ್ವಾಗತಾರ್ಹ.
ನಾನು ನನ್ನ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳಲು ಮನೆಯಿಂದಲೇ ಕೆಲಸವನ್ನು ಈ ಕೆಳಗಿನಂತೆ ಬಳಸಿಕೊಂಡಿದ್ದೇನೆ.
1) ವಿಷಯದ ಪಾಂಡಿತ್ಯ ಹೊಂದಲು ಅನುಕೂಲ : ಬಿಡುವಿನ ಸಮಯದಲ್ಲಿ ಅನೇಕ ಪುಸ್ತಕಗಳ ಓದು
ಜ್ಞಾನಾರ್ಜನೆಗೆ ಸಹಕಾರಿಯಾಗಿದೆ.ಇದರಿಂದ ಪಾಠಗಳ ವಿಷಯದ ಬಗ್ಗೆ ಹೆಚ್ಚು ಹೆಚ್ಚಾಗಿ ತಿಳಿದುಕೊಂಡು
ಆ ವಿಷಯ ಜ್ಞಾನ ವಿಧ್ಯಾರ್ಥಿಗಳಿಗೆ ಬೋಧಿಸಲು ಉಪಯುಕ್ತವಾಗಿದೆ.
2)
ಬೋಧಿಸುವ
ಕಲೆ : ಅಂತರ್ಜಾಲದಲ್ಲಿ ಸಿಗುವ ಅನೇಕ ಯೂಟ್ಯುಬ ವಿಡಿಯೋಗಳು ಹಾಗು ಮಾದರಿ ತಯ್ಯಾರಿಸುವ ವಿಧಾನಗಳು
ನನ್ನ ಬೋಧನಾ ಕಲೆಯನ್ನು ಉತ್ಕೃಷ್ಟಗೊಳಿಸಿಕೊಳ್ಳಲು
ತುಂಬಾ ಪರಿಣಾಮಕಾರಿಯಾಗಿವೆ.
3) ಸಾಮಾಜಿಕ ಜವಾಬ್ದಾರಿ : ಸೃಜನಶೀಲತೆ, ಸ್ನೇಹಪರತೆ, ಮತ್ತು ಸಮಾಜ ಹಾಗು ಸಮುದಾಯಕ್ಕಾಗಿ ಶಿಕ್ಷಕನಾಗಿ ತನಗಿರುವ
ಜವಾಬ್ದಾರಿಯನ್ನು ಅರಿಯಲು ಸಾಧ್ಯವಾಗಿದೆ.
4) ಆತ್ಮಸಮ್ಮಾನ ಮತ್ತು ಗೌರವ ; ಪ್ರತಿ ದಿನ ನನ್ನ ವಿಧ್ಯಾರ್ಥಿಗಳಿಗೆ ದೂರವಾಣಿಯ
ಮೂಲಕ ಕರೆ ಮಾಡಿ ಕೋವಿಡ-19 ರ ಮುಂಜಾಗ್ರತೆ ಹಾಗು
ಪಾಠ ವಿಷಯಗಳ ಬಗ್ಗೆ ಚರ್ಚಿಸಿ ತಿಳಿ ಹೇಳಿದಾಗ ವಿಧ್ಯಾರ್ಥಿಗಳ ಪೋಷಕರಿಂದ ಶಿಕ್ಷಕರಿಗೆ ಹೆಚ್ಚಿನ
ಗೌರವ ಲಭ್ಯವಾಗುತ್ತಿದೆ. ಮತ್ತು ಸರಕಾರ ತನ್ನ ಬಗ್ಗೆ ತೋರಿಸುತಿರುವ ಕಾಳಜಿಯ ಬಗ್ಗೆ ಮೆಚ್ಚುಗೆ
ವ್ಯಕ್ತಪಡಿಸುತ್ತಿದ್ದಾರೆ.
5)ಸೃಜನಶೀಲತೆ : ನಾವು ಬೋಧಿಸುವ ತರಗತಿಯ ವಿಧ್ಯಾರ್ಥಿಗಳ ವಿಷಯಕ್ಕೆ
ಸಂಬಂಧಿಸಿದಂತೆ ಕಲಿಕೊಪಕರಣ ಸಿದ್ಧಮಾಡಿಕೊಳ್ಳುತ್ತಿರುವುದರಿಂದ ನಮ್ಮ ಸೃಜನಶೀಲತೆ ಹೆಚ್ಚುತಿದೆ.
ಏನಾದರೂ ಹೊಸದನ್ನು ಆವಿಷ್ಕರಿಸಬೇಕು ಎನ್ನುವ
ಹಂಬಲ ಉತ್ಸಾಹ ಹೆಚ್ಚುತ್ತಿದೆ.
6) ಸಂವಹನ ಕಲೆ: ಪ್ರತಿನಿತ್ತ್ಯ ನಾವು ವಿಧ್ಯಾರ್ಥಿಗಳ ಜೊತೆ
ಶಾಲೆಯಲ್ಲಿ ಮಾತಾಡೋದು ಸಾಮನ್ಯ ವಿಷಯ ಆದರೆ ಈಗ
ವಿಧ್ಯಾರ್ಥಿಗಳ ಜೊತೆಗೆ ಅವರ ಪೋಷಕರೊಂದಿಗೆ ಮಾತನಾದುತಿರುವುದರಿಂದ ನನ್ನ ಸಂವಹನ ಕಲೆ ಉತ್ತಮವಾಗುತ್ತಿದೆ.
ಉಧಾ: ದೊಡ್ಡವರ ಜೊತೆ ಹೇಗೆ, ವಯಸ್ಸಾದವರ ಜೊತೆ ಹೇಗೆ ಮತಾಡಬೇಕೇಂಬುದು ಚೆನ್ನಾಗಿ
ಕರಗತವಾಗುತ್ತಿದೆ.
7) ಸಮಯದ ಸದ್ಬಳಕೆ : ಬಿಡುವಿನ ಸಮಯ ವ್ಯರ್ಥವಾಗಿ ಹೋಗದೆ ಸಮಯದ
ಸದ್ಬಳಕೆಯಾಗುತ್ತಿದೆ.
8) ಸಂಪನ್ಮೂಲ ವ್ಯಕ್ತಿಯಾಗಲು : ಶಿಕ್ಷಕನಾದ ನಾನು ಯಾವುದೇ ಸಂದರ್ಭಕ್ಕೂ ಹೊಂದಿಕೊಳ್ಳಲು ಮತ್ತು ವಿಷಯ
ವಸ್ತುಗಳನ್ನು ಕ್ರೋಡಿಕರಿಸಿಕೊಂಡು ಸಂಪನ್ಮೂಲ ವ್ಯಕ್ತಿಯಾಗಿ ರೂಪಗೊಳ್ಳಲು ಪ್ರಯೋಜನಕಾರಿಯಾಗಿದೆ.
9)ಪ್ರಭಾವಶಾಲಿ
ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿಯಾಗಿದೆ: ಯಾವಾಗಲೂ ಚೈತನ್ಯಶಾಲಿ,ಉತ್ಸಾಹಶಾಲಿ,ಹಾಗು ಸಕಾರಾತ್ಮಕ
ಮನೋಭಾವ ಹೊಂದಲು ಮತ್ತು ಪ್ರಭಾವಶಾಲಿ ವ್ಯಕ್ತಿತ್ವ ರೂಪಿಸಿಕೊಳ್ಳಲು ಈ ಸದಾವಕಾಶವನ್ನು ಬಳಸಿಕೊಂಡಿದ್ದೇನೆ.
10)ತಂತ್ರಜ್ಞಾನದಲ್ಲಿ ಆಸಕ್ತಿ : ನಾವು ಸಿದ್ಧಪಡಿಸುವ ನಿಯೋಜಿತ ಕಾರ್ಯಗಳು ಸಾಮಾಜಿಕ
ಜಾಲತಾಣದಲ್ಲಿನ ಬ್ಲಾಗಿಂಗ್ ನಲ್ಲಿ ಪೋಸ್ಟ್ ಮಾಡಬೇಕಾಗಿರುವುದರಿಂದ ಒಂದು ಹೊಸ ವಿಷಯ
ತಿಲಿದುಕೊಂಡಂತಾಗಿದೆ.ಇದರಿಂದ ತಂತ್ರಜ್ಞಾನದಲ್ಲಿ,ಅಂತರ್ಜಾಲಗಳಲ್ಲಿ ಕಲಿಯಬೇಕಾದದ್ದು
ತುಂಬಾಯಿದೆ.ಪ್ರಸ್ತುತ ಸಂದರ್ಭಕ್ಕೆ ಅದು ಅವಶ್ಯಕ ಕೂಡ ಎಂಬುದು ಮನವರಿಕೆಯಾಗಿದೆ.
ಪರಿವರ್ತನೆ ಜಗದ ನಿಯಮ ಅಂತೆಯೇ ಶಿಕ್ಷಣ ಕೂಡ ಕಾಕಕಾಲಕ್ಕೆ ಅವಶ್ಯಕತೆಯನ್ನು
ಹುಡುಕಿಕೊಂಡು ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡುತ್ತದೆ.ಕಾರಣ ಸಾಮಾಜಿಕ ಪರಿವರ್ತನೆಗೆ ಶಿಕ್ಷಣ
ಅಡಿಗಲ್ಲು ಶಿಕ್ಷಕ ಪರಿವರ್ತನಾ ಕಾರ್ಯದ ರೂವಾರಿ. ಹಾಗಾಗಿ ಶಿಕ್ಷಣದ ಹೊಸ ಹೊಸ ಆಯಾಮ ಆವಿಷ್ಕಾರಗಳು
ಅರಗಿಸಿಕೊಂಡು ಈ ಒಂದು ಕಠಿಣ ಪರಿಸ್ಥಿತಿಯಲ್ಲಿ ಅನುಷ್ಠಾನಗೊಳಿಸುವುದು ನಮ್ಮ ಕರ್ತವ್ಯ
ಹಾಗು ಜವಾಬ್ದಾರಿಯಾಗಿದೆ.
-:ಮುಕ್ತಾಯ:-
.
ಉತ್ತಮ
ReplyDeleteSuper sir
ReplyDeleteಉತ್ತಮ ಲೇಖನ
ReplyDeleteThanks A Lot Dear All
ReplyDeleteNice ri sir
ReplyDeleteWell done sir
ReplyDelete